ಸುದ್ದಿ ಮತ್ತು ಅಭಿಪ್ರಾಯ
ವರದಿ ಏನಾಯಿತು ಎನ್ನುತ್ತದೆ; ಅಭಿಪ್ರಾಯ ಬರಹ ಒಂದು ನಿಲುವನ್ನು ವಾದಿಸುತ್ತದೆ. ಆನ್‌ಲೈನ್‌ನಲ್ಲಿ ಇವುಗಳ ನಡುವಿನ ಗೆರೆ ಸುಲಭವಾಗಿ ಮಾಸುತ್ತದೆ.
ಸುದ್ದಿ ವರದಿ ಏನಾಯಿತು, ಯಾರು ಏನು ಹೇಳಿದರು, ಯಾವಾಗ ಎಂದು ತಿಳಿಸುತ್ತದೆ. ಅಭಿಪ್ರಾಯ ಬರಹ ಒಂದು ನಿಲುವಿನ ಪರ ವಾದಿಸುತ್ತದೆ. ಸಂಪಾದಕೀಯ ಮಾಧ್ಯಮದ ಸ್ವಂತ ನಿಲುವು; ಅಂಕಣ ಅದನ್ನು ಬರೆದವರದು. ವಿಶ್ಲೇಷಣೆ ಮತ್ತು ಸುದ್ದಿ ವಿವರಣೆಗಳು ನಡುವೆ ಇವೆ: ಅವು ವರದಿ ಮಾಡುತ್ತವೆ, ಅರ್ಥೈಸುತ್ತವೆ ಕೂಡ.
ಎರಡೂ ಉಪಯುಕ್ತ. ಒಂದನ್ನು ಇನ್ನೊಂದೆಂದು ಓದಿದಾಗ ತೊಂದರೆ ಶುರುವಾಗುತ್ತದೆ. ಗುರುತಿಲ್ಲದೆ ಹಂಚಿದ ಅಭಿಪ್ರಾಯದ ಶೀರ್ಷಿಕೆ ವರದಿಯಂತೆ ಕಾಣುತ್ತದೆ, ಅದರಲ್ಲಿನ ಬಲವಾದ ಹೇಳಿಕೆ ಸಾಬೀತಾದ ಸಂಗತಿಯಂತೆ ಓದಬಹುದು.
ಮುದ್ರಣದಲ್ಲಿ “ಅಭಿಪ್ರಾಯ” ಅಥವಾ “ಸಂಪಾದಕೀಯ” ಪುಟ ಯಾವುದು ಏನು ಎಂದು ತಿಳಿಸುತ್ತದೆ. ಆನ್‌ಲೈನ್‌ನಲ್ಲಿ ಆ ಪುಟ ಹೆಚ್ಚಾಗಿ ಕಾಣೆಯಾಗುತ್ತದೆ: ಹಂಚಿದ ಕೊಂಡಿ ಅಥವಾ ಫೀಡ್‌ನಲ್ಲಿ ಶೀರ್ಷಿಕೆ ಮಾತ್ರ ಇರಬಹುದು.
ಎರಡನ್ನೂ ಬೇರ್ಪಡಿಸುವುದು ಕೇಳಿದಷ್ಟು ಸುಲಭವಲ್ಲ. 2018ರಲ್ಲಿ ಪ್ಯೂ ರಿಸರ್ಚ್ ಸೆಂಟರ್ ಅಮೆರಿಕದ ಸುಮಾರು 5,000 ವಯಸ್ಕರನ್ನು ಸಮೀಕ್ಷೆ ಮಾಡಿದಾಗ, ತೋರಿಸಿದ ಐದೂ ಸಂಗತಿ ಹೇಳಿಕೆಗಳನ್ನು ಸರಿಯಾಗಿ ಗುರುತಿಸಿದವರು ಸುಮಾರು ನಾಲ್ಕನೇ ಒಂದು ಭಾಗ, ಐದೂ ಅಭಿಪ್ರಾಯಗಳನ್ನು ಗುರುತಿಸಿದವರು ಸುಮಾರು ಮೂರನೇ ಒಂದು ಭಾಗ. ಭಾರತದಲ್ಲಿ ಇಂಥ ಅಧ್ಯಯನ ನಮಗೆ ತಿಳಿದಂತೆ ಇಲ್ಲ.
ಹುಡುಕುವಿನಲ್ಲಿ
ಅಭಿಪ್ರಾಯ, ಸಂಪಾದಕೀಯ, ಫ್ಯಾಕ್ಟ್ ಚೆಕ್ ಗುರುತುಗಳು ಶೀರ್ಷಿಕೆಯ ಪಕ್ಕದಲ್ಲೇ ಇರುತ್ತವೆ. ಪ್ರತಿಯೊಂದೂ ಪ್ರಕಾಶಕರದೇ ಗುರುತು: ಅವರ ಶೀರ್ಷಿಕೆ, ಫೀಡ್ ಅಥವಾ ಕೊಂಡಿಯಲ್ಲಿನ ವಿಭಾಗದಿಂದ ಓದಿದ್ದು, ಹುಡುಕುವಿನ ಊಹೆ ಅಲ್ಲ. ಗುರುತು ಇಲ್ಲ ಎಂದರೆ ಪ್ರಕಾಶಕರು ಗುರುತಿಸಿಲ್ಲ ಎಂದು ಮಾತ್ರ, ಅದು ಸುದ್ದಿ ಎಂದಲ್ಲ.
ನಿಮಗೆ ಪ್ರಶ್ನೆಗಳು
- ಈ ಬರಹ ವರದಿ ಮಾಡುತ್ತಿದೆಯೇ, ವಾದಿಸುತ್ತಿದೆಯೇ? ಯಾವ ಪದಗಳು ಅದನ್ನು ತಿಳಿಸುತ್ತವೆ?
- ಆ ಗುರುತು ಎಲ್ಲಿಂದ ಬಂತು: ಮಾಧ್ಯಮದಿಂದಲೇ, ನಿಮ್ಮಿಂದಲೇ?
ಆಧಾರಗಳು
ಆಧಾರಗಳು ಇಂಗ್ಲಿಷ್‌ನಲ್ಲಿವೆ.